TOC

This article is currently in the process of being translated into Kannada (~98% done).

About WPF:

What is WPF?

ವಿಂಡೋಸ್ ಪ್ರೆಸೆಂಟೇಶನ್ ಫೌಂಡೇಶನ್ ಅನ್ನು ಸೂಚಿಸುವ WPF, .NET ಫ್ರೇಮ್‌ವರ್ಕ್‌ ನೊಂದಿಗೆ ಬಳಸಲಾಗುವ GUI ಫ್ರೇಮ್‌ವರ್ಕ್‌ಗೆ ಮೈಕ್ರೋಸಾಫ್ಟ್ನ ನೂತನ ವಿಧಾನವಾಗಿದೆ. ಹಾಗಾದರೆ GUI ಫ್ರೇಮ್‌ವರ್ಕ್ ಎಂದರೇನು?

GUI ಎಂದರೆ ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ ಎಂಬುದಾಗಿದ್ದು, ಇದನ್ನು ನೀವು ಬಹುಶಃ ಇದೀಗ ನೋಡುತ್ತಿದ್ದೀರಿ. ನಿಮ್ಮ ಕಂಪ್ಯೂಟರ್‌ನೊಂದಿಗೆ ಕೆಲಸ ಮಾಡಲು ವಿಂಡೋಸ್ GUI ಎಂಬುದು ಅಗತ್ಯವಿದೆ ಮತ್ತು ನೀವು ಈ ಡಾಕ್ಯುಮೆಂಟ್ ಅನ್ನು ಓದುವ ಬ್ರೌಸರ್‌ನಲ್ಲಿ GUI ಇದ್ದು ಅದು ವೆಬ್ ಅನ್ನು ಸರ್ಫ್ ಮಾಡಲು ನಿಮಗೆ ಅನುಮತಿ ದೊರೆಯುತ್ತದೆ.

ಲೇಬಲ್‌ಗಳು, ಟೆಕ್ಸ್ಟ್‌ ಬಾಕ್ಸ್ಗಳು ಮತ್ತ ಈಗಾಗಲೇ ತಿಳಿದಿರುವಂಥ ಇತರ ವ್ಯಾಪಕ ಶ್ರೇಣಿಯ GUI ಅಂಶಗಳೊಂದಿಗೆ ಅಪ್ಲಿಕೇಶನ್ ರಚಿಸಲು GUI ಫ್ರೇಮ್‌ವರ್ಕ್ ನಿಮಗೆ ಅನುಮತಿ ನೀಡುವುದು. GUI ಫ್ರೇಮ್‌ವರ್ಕ್ ಇಲ್ಲದಿದ್ದರೆ ನೀವು ಈ ಅಂಶಗಳನ್ನು ಹಸ್ತಮುಖೇನ ಮಾಡಬೇಕಾಗುತ್ತದೆ. ಟೆಕ್ಸ್ಟ್‌ ಹಾಗೂ ಮೌಸ್ ಇನ್‌ಪುಟ್‌ನಂತಹ ಎಲ್ಲಾ ಬಳಕೆದಾರರ ಸಂವಹನ ಸನ್ನಿವೇಶಗಳನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಇದು ಬಹಳ ಶ್ರಮ ಬೇಡುವ ಕಾರ್ಯವಾಗಿದೆ. ಆದ್ದರಿಂದ, ಹೆಚ್ಚಿನ ಡೆವಲಪರ್‌ಗಳು GUI ಫ್ರೇಮ್‌ವರ್ಕ್ ಅನ್ನು ಬಳಸುತ್ತಾರೆ ಹಾಗೂ ಅದು ಎಲ್ಲಾ ಮೂಲಭೂತ ಕೆಲಸಗಳನ್ನೂ ತಂತಾನೇ ಮಾಡುತ್ತದೆ ಮತ್ತು ಡೆವಲಪರ್‌ಗಳು ಉತ್ತಮ ಅಪ್ಲಿಕೇಶನ್‌ಗಳನ್ನು ರಚಿಸುವತ್ತ ಗಮನಹರಿಸಲು ಅನುವು ಮಾಡಿಕೊಡುತ್ತದೆ.

ಅಲ್ಲಿ ಸಾಕಷ್ಟು GUI ಚೌಕಟ್ಟುಗಳಿವೆ, ಆದರೆ .NET ಡೆವಲಪರ್‌ಗಳಿಗೆ, ಅತ್ಯಂತ ಆಸಕ್ತಿ ಹಾಗೂ ಅನುಕೂಲಕರವಾಗಿರುವ ವಿಧಾನವೆಂದರೆ ಪ್ರಸ್ತುತ ವಿನ್‌ಫಾರ್ಮ್ಸ್ ಮತ್ತು WPF. WPF ಎಂಬುದು ಹೊಸದು, ಆದರೆ ಮೈಕ್ರೋಸಾಫ್ಟ್ ಕಂಪೆನಿಯು ಇನ್ನೂ ವಿನ್‌ಫಾರ್ಮ್‌ಗಳನ್ನು ನಿರ್ವಹಿಸುತ್ತಿದೆ ಮತ್ತು ಬೆಂಬಲಿಸುತ್ತಿದೆ. ಮುಂದಿನ ಅಧ್ಯಾಯದಲ್ಲಿ ನೀವು ನೋಡುವಂತೆ, ಎರಡು ಚೌಕಟ್ಟುಗಳ ನಡುವೆ ಕೆಲವು ವ್ಯತ್ಯಾಸಗಳಿವೆ, ಆದರೆ ಅವುಗಳ ಉದ್ದೇಶ ಒಂದೇ ಆಗಿರುತ್ತದೆ ಎಂಬುದನ್ನು ತಿಳಿಯುವಿರಿ. ಉತ್ತಮ GUI ಯೊಂದಿಗೆ ಅಪ್ಲಿಕೇಶನ್‌ಗಳನ್ನು ರಚಿಸಲು ಸುಲಭವಾಗುವುದು. ಇದೇ ಇದರ ಉದ್ದೇಶ.

ಮುಂದಿನ ಅಧ್ಯಾಯದಲ್ಲಿ, ವಿನ್‌ಫಾರ್ಮ್ಸ್ ಮತ್ತು ಡಬ್ಲ್ಯೂಪಿಎಫ್ ನಡುವಿನ ವ್ಯತ್ಯಾಸಗಳನ್ನು ನಾವು ಗಮನಿಸೋಣ.